ಯೂಟ್ಯೂಬ್‌ ಚಾನ‌ಲ್ ಹೇಗೆ ಪ್ರಾರಂಭಿಸುವುದು ?| Share and Earn : How To Create Youtube Channel ?

                 ಆಧುನಿಕ ಕಾಲದಲ್ಲಿ ಸಾಕಷ್ಟು ಜನ ತಮ್ಮಲ್ಲಿರುವ ವಿದ್ಯೆ , ಕೌಶಲ್ಯ ಅಥವಾ ಇತರ ಮಾಹಿತಿಗಳನ್ನು ಜನರೊಂದಿಗೆ ತಂತ್ರಜ್ಞಾನದ ಸಹಾಯದಿಂದ ಹಂಚಿಕೊಂಡು ಸಮಾಜದಲ್ಲಿ ತಮ್ಮ ಅಸ್ಥಿತ್ವ ಮತ್ತು ಸ್ಥಾನವನ್ನು ಹೆಚ್ಚಿನ ಸ್ಥರಕ್ಕೆ ಬೆಳೆಸುವುದಲ್ಲದೆ ಅದರಿಂದ ದುಡ್ಡನ್ನು ಕೂಡ ಗಳಿಸುತ್ತಿದ್ದಾರೆ. 

                    ಕೇವಲ ಹಣ ಗಳಿಸುವ ಉದ್ದೇಶದಿಂದ ನಾವು ಈ ತಂತ್ರಜ್ಞಾನವನ್ನು ಬಳಸುವುದಕ್ಕಾಗಿ ಇಚ್ಛಿಸಿದರೆ ನಾವು ಅಂದುಕೊಂಡ ಹಾಗೆ ಸಫಲರಾಗುವುದಿಲ್ಲ. ನಮ್ಮ ಕಾರ್ಯ , ಪ್ರಯತ್ನ ಸಮಾಜಮುಖಿಯಾಗಿರಬೇಕು ಮತ್ತು ಜನರ ಸಮಸ್ಯೆಯನ್ನು ಬಗೆಹರಿಸುವಂತಿರಬೇಕು (Problem Solving) ಅಂದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

                            ಈಗಿನ ಕಾಲದಲ್ಲಿ ನಮ್ಮಲ್ಲಿರುವ ಮಾಹಿತಿಯನ್ನು ಹಂಚಿಕೊಂಡು ಅದರಿಂದ ಹಣ ಗಳಿಸುವ ಸಾಕಷ್ಟು ವೇದಿಕೆಗಳಿವೆ . ಅದರಲ್ಲಿ ಕೆಲವು ಸುಲಭ ಬಳಕೆ ಮತ್ತು ಹೆಚ್ಚಿನ ಗಳಿಕೆ ಇರುವ ವೇದಿಕೆ ಈ ಕೆಳಗಿನಂತಿದೆ.......



1) ಯೂ- ಟ್ಯೂಬ್‌ ಚಾನೆಲ್‌ : YouTube Channel



  • ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ವಿಷಯದಲ್ಲಿಆಸಕ್ತಿ ಮತ್ತು ಅಪಾರವಾದ ಜ್ಞಾನವನ್ನು ಹೊಂದಿರುತ್ತಾನೆ. ಅದೇ ರೀತಿ ನಿಮಗೆ ಯಾವ ವಿಷಯದಲ್ಲಿ ಹೆಚ್ಚಿನ ಅಭಿರುಚಿ ಇದೆ ಎಂದು ಆಲೋಚಿಸಬೇಕಾಗಿದೆ. ಅಂತಹ ವಿಷಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಬರುವ ಹಲವು ಅಂಶಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. 
  •  ಉದಾಹರಣೆಗೆ -  ಅಡುಗೆ , ಪ್ರವಾಸ , ಶಿಕ್ಷಣ (Only One Subject)  , ತಂತ್ರಜ್ಞಾನ , Unboxing videos , ನೃತ್ಯ ,ಕ್ರೀಡೆ , ಪೋಟೋಗ್ರಾಫಿ , ಎಡಿಟಿಂಗ್‌ ಇತ್ಯಾದಿ
  • ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡ ನಂತರ ಮರಳಿ ಅದನ್ನು ಬದಲಾಯಿಸಬಾರದು , ನಿರಂತರವಾಗಿ ಅದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಅಪಲೋಡ್‌ ಮಾಡುತ್ತಾ ಇರಬೇಕು.
  • ನಿಮ್ಮ ವಿಡಿಯೋಗಳು ಜನರಲ್ಲಿರುವ ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸುವಂತಿರಬೇಕು.
  • ಪುಸ್ತಕಗಳನ್ನು ಓದುವುದು ಅಥವಾ ಇತರರ ವೀಡಿಯೋ ನೋಡುವುದರಿಂದ ಆಸಕ್ತಿ ಇರುವ ವಿಷಯದಲ್ಲಿ ಜ್ಞಾನವನ್ನು ನಿರಂತರವಾಗಿ ಹೆಚ್ಚಿಸುತ್ತಾ ಇರಬೇಕು.
  • ಆರಂಭದಲ್ಲಿ ವೀಡಿಯೋ ತಯಾರಿಸಲು ಕೇವಲ ಸ್ಮಾರ್ಟ ಪೋನನ ಅವಶ್ಯಕತೆ ಇರುತ್ತದೆ.
  • ವೀಡಿಯೋಗಳನ್ನು ಯಾವ ರೀತಿ ತಯಾರಿಸಬೇಕೆಂದು ನೀವು ಯೂ-ಟ್ಯೂಬ್‌ ನಿಂದಲೇ ಕಲಿಯಬಹುದು.
  • ಕೆಲವರು ವೀಡಿಯೋ ತಯಾರಿಸಲು ತಮ್ಮ ಮುಖವನ್ನು ರಿಕಾರ್ಡ ಮಾಡಲು ಭಯ ಪಡುತ್ತಾರೆ ಆದರೆ ವಿಡಿಯೋ ಮಾಡಲಕ್ಕೆ ನಿಮ್ಮ ಮುಖ ತೋರಿಸಲೇಬೇಕು ಎಂದು ಯಾವುದೇ ನಿಯಮಗಳಿಲ್ಲ, ನಿಮ್ಮ ಸ್ಮಾರ್ಟ್‌ ಪೋನ್‌ ಅಥವಾ ಲ್ಯಾಪ್‌ ಟಾಪ ಬಳಸಿಕೊಂಡು ಕೇವಲ ನಿಮ್ಮ ಧ್ವನಿಯನ್ನು ಬಳಸಿಕೊಂಡು ವಿಡಿಯೋ ಮಾಡಬಹುದು. 
  • ಒಂದು ವೇಳೆ ನೀವು ಮಾಡುವ ವಿಡಿಯೋ ಜನರಿಗೆ ಸಹಾಯಕವಾದರೆ ಕ್ರಮೇಣ ನೀವು ಅದರಿಂದ ದುಡ್ಡು ಗಳಿಸಬಹುದು.

  • ನೀವು ದುಡ್ಡು ಗಳಿಸಲು ಕನಿಷ್ಟ 1000 Subscribers ಗಳನ್ನು ಹೊಂದಿರಬೇಕು.
  • ಕ್ವಾಲಿಟಿ ವಿಡಿಯೋ ತಯಾರಿಸುವಾಗ ಉಪಯುಕ್ತವಾಗುವ ವಸ್ತುಗಳು
ಪ್ಲಿಫ್‌ಕಾರ್ಟನಲ್ಲಿನ ವಸ್ತುಗಳು



 














No comments: