ವಾರ್ಷಿಕ ಪರೀಕ್ಷೆಯಲ್ಲಿ 90% ಕ್ಕಿಂತ ಅಧಿಕ ಅಂಕವನ್ನು ಪಡೆಯಲು ಅಧ್ಯಯನದಲ್ಲಿ ಪಾಲಿಸಬೇಕಾದ ನಿಯಮಗಳು : Techniques should follow to get above 90% in Board Exams

 

1. ಅಧ್ಯಯನದ ಯೋಜನೆ  (Study Plan)

                    ಒಂದೇ ವಿಷಯದಲ್ಲಿ ಹೆಚ್ಚಿನ ಕಾಲ ಕಳೆಯುದಕ್ಕಿಂತ , ಎಲ್ಲಾ ವಿಷಯಗಳು ಮತ್ತು ಇತರೆ ಕಾರ್ಯಗಳನ್ನು ಒಳಗೊಂಡ ಅಧ್ಯಯನದ ಯೋಜನೆಯನ್ನು ತಯಾರಿಸಿ. 45-50 ನಿಮಿಷದ ಪ್ರತಿ ವಿಷಯದ ನಂತರ ವಿರಾಮವನ್ನು ಸೇರಿಸಿ. ಅಧ್ಯಯನದ ಯೋಜನೆಯು ಎಲ್ಲಾ ವಿಷಯದ ಮೇಲೆ ಸಮನಾಗಿ ಗಮನ ಹರಿಸಲು ನಮಗೆ ಸಹಾಯಕವಾಗುತ್ತದೆ. ಇದರಿಂದ ಲಭ್ಯವಿರುವ ಕಾಲವನ್ನು ಪ್ರತಿ ವಿಷಯಕ್ಕೆ ವಿಭಜಿಸಲು ಸಹಾಯಕವಾಗುತ್ತದೆ. ಅಧ್ಯಯನದ ಯೋಜನೆಯಿಂದ ಸಮಯ ನಿರ್ವಹಣೆಯ ಕೌಶಲ್ಯವನ್ನು ವೃಧ್ಧಿಸಿಕೊಳ್ಳಬಹುದು.


2. ಸಣ್ಣ ಪ್ರಮಾಣದ ಅಧ್ಯಯನ (Small-Scale Study)

            ನಿಮ್ಮ ಇಡೀ ಪಠ್ಯಕ್ರಮವನ್ನು ವಿಷಯಾಧಾರಿತವಾಗಿ ಸಣ್ಣ ಭಾಗಗಳಾಗಿ ವಿಭಾಗಿಸಿ. ಈ ಭಾಗಗಳನ್ನು ಅಧ್ಯಯನದ ಯೋಜನೆಯ (Time Table) ಪ್ರಕಾರವಾಗಿ ಅಧ್ಯಯನ ಮಾಡಿ.  ಇದರಿಂದ ಪ್ರತಿ ವಿಷಯವನ್ನು ಸರಿಯಾಗಿ ಮತ್ತು ಆಳವಾಗಿ ಅರ್ಥೈಸಿಕೊಳ್ಳಬಹುದು. ಸಣ್ಣ ಪ್ರಮಾಣದ ಅಧ್ಯಯನದಿಂದ ಕಡಿಮೆ ಸಮಯದಲ್ಲಿ ಪಠ್ಯಕ್ರಮದ ಭಾಗಗಳನ್ನು ಅರ್ಥೈಸಿಕೊಳ್ಳಬಹುದು. ರಿವಿಸನ್‌ ಮಾಡುವ ಸಮಯದಲ್ಲಿ ನಿಮ್ಮ ಮೇಲಿನ ಒತ್ತಡವು ಕಡಿಮೆಯಾಗುತ್ತದೆ.

3. ನೋಟ್ಸ್‌ ತಯಾರಿಕೆ (Prepare Notes)

           ವಾರ್ಷಿಕ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಲು ಸ್ವಂತ ನೋಟ್ಸ ತಯಾರಿಕೆಯು ಬಹುಮುಖ್ಯ ಪಾತ್ರ ವಹಿಸುತ್ತದೆ. ಪರೀಕ್ಷೆಯ ದಿನಗಳಲ್ಲಿ ರಿವಿಸನ್‌ ಮಾಡುವ ಸಮಯದಲ್ಲಿ ಕೇವಲ ಸ್ವಂತ ನೋಟ್ಸಗಳು ಸಹಾಯಕವಾಗುತ್ತದೆ. ಕೊನೆಯ ಸಮಯದಲ್ಲಿ ಪಠ್ಯದ ಬಹುಮುಖ್ಯ ಅಂಶಗಳನ್ನು ನೆನಪಿಡಲು ಅವಶ್ಯಕವಾಗುತ್ತದೆ.

4. ಬಹುಮುಖ್ಯ ಪ್ರಶ್ನೆಗಳನ್ನು ವರ್ಗೀಕರಿಸಿ.(Categorize the important Areas)

            ಅಧ್ಯಾಯವಾರು ನಿಗದಿಪಡಿಸಲಾದ ಅಂಕಗಳ ಆಧಾರದ ಮೇಲೆ ನಿರ್ದಿಷ್ಟ ಅಧ್ಯಾಯದಲ್ಲಿ ಬರುವ ಬಹುಮುಖ್ಯ ಪ್ರಶ್ನೆಗಳನ್ನು ವರ್ಗಿಕರಿಸಿ ಬರೆದಿಟ್ಟುಕೊಳ್ಳುವುದೊಂದು ಚಾಣಾಕ್ಷ ನೀತಿಯಾಗಿದೆ. ಇದೇ ಪ್ರಶ್ನೆಗಳನ್ನು ಮೊದಲು ಓದುಕೊಂಡು ಮತ್ತು ಅವುಗಳ ಮೇಲೆ ಬಲವಾದ ಹಿಡಿತವಿಟ್ಟುಕೊಳ್ಳುದರಿಂದ ನೀವು ಸುಲಭವಾಗಿ ಗುರಿ ತಲುಪಬಹುದು.

5. ಅಧ್ಯಯನದ ದಿನಂಪ್ರತಿ ಮನವರಿಕೆ(Revise your work daily)

           ಇಡೀ ದಿನದಲ್ಲಿ ಓದಿದ ಅಂಶಗಳನ್ನು ಅದೇ ದಿನದ ಕೊನೆಗೆ ರಿವಿಸನ್‌ ಮಾಡಬೇಕಾಗಿದೆ. ಇದರಿಂದ ಅಧ್ಯಯನ ಮಾಡಲು ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಒಂದು ವೇಳೆ  ರಿವಿಸನ್‌ ಮಾಡುವುದನ್ನು ನೀವು ನಿರ್ಲಕ್ಷಿಸಿದರೆ ಕೊನೆಗೆ ಓದಿದ ಎಲ್ಲಾ ಅಂಶಗಳನ್ನು ಸುಲಭವಾಗಿ ಮರೆತು ಬಿಡುತ್ತೀರಿ. ರಿವಿಸನ್‌ ಮಾಡುವುದರಿಂದ ನಿಮ್ಮ ಕಲಿಕಾ ಸಾಮರ್ಥ್ಯ ಹೆಚ್ಚಾಗುವುದಲ್ಲದೆ , ಈ ಹಿಂದೆ ಅಧ್ಯಯನ ಮಾಡಿ ಅರ್ಥೈಸಿಕೊಳ್ಳಲಾಗದ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳಬಹುದು.

6. ಪಠ್ಯಪುಸ್ತಕದ ಅಧ್ಯಯನ (Textbooks Study)

            ಪ್ರತಿ ವಿಷಯದ ಅಧ್ಯಯನಕ್ಕಾಗಿ ಆಯಾ ಪಠ್ಯಪುಸ್ತಕವನ್ನೇ ಬಳಸಬೇಕು. ಪಠ್ಯಪುಸ್ತಕದ ಯಾವುದೇ ಅಂಶವನ್ನು ಬಿಟ್ಟಿಲ್ಲವೆಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಪಠ್ಯಪುಸ್ತಕದಲ್ಲಿ ಪರೀಕ್ಷೆಯಲ್ಲಿ ಕೇಳಬಹುದಾದ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವುದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಾಯಕವಾಗಿದೆ. ಪಠ್ಯಪುಸ್ತಕದಲ್ಲಿ ಬರುವ ಯಾವುದೇ ಚಿತ್ರ(Diagram) , ಉದಾಹರಣೆ(Examples) ಕೋಷ್ಟಕ(Table) , ಗ್ರಾಫ್‌ (Graph)  ಗಳನ್ನು ನಿರ್ಲ್ಯಕ್ಷಿಸಬಾರದು. ಏಕೆಂದರೆ ಈ ಚಿಕ್ಕಪುಟ್ಟ ಅಂಶಗಳು ವಾರ್ಷಿಕ ಪರೀಕ್ಷೆಗೆ ಪ್ರಮುಖ ಪಾತ್ರ ವಹಿಸುತ್ತದೆ. 


7. ಮಾದರಿ ಪ್ರಶ್ನೆಪತ್ರಿಕೆ ಮತ್ತು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಭ್ಯಾಸ (Practice Model Question Papers and Previous Years Papers)

            ಸಾಧ್ಯವಾದಷ್ಟು ಹೆಚ್ಚಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸಬೇಕು , ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದರಿಂದ ಸಂಭವನೀಯವಾಗಿ ಕೇಳಬಹುದಾದ ಪ್ರಶ್ನೆಗಳ ಬಗ್ಗೆ ತಿಳಿದುಕೊಳ್ಳವುದಷ್ಟೇ ಅಲ್ಲದೆ ಇದರಿಂದ ನೀವು ವಾರ್ಷಿಕ ಪರೀಕ್ಷೆ ಬರೆಯುವ ವೇಗ (Speed) ಮತ್ತು ನಿಖರತೆಯ (Accuracy) ಕೌಶಲ್ಯ ಹೆಚ್ಚಿಸಿಕೊಳ್ಳಬಹುದು. ಪ್ರಶ್ನೆಪತ್ರಿಕೆಗಳ ಅಭ್ಯಾಸದಿಂದ ಊಹಿಸಲಾರದಷ್ಟು ಲಾಭ ಪಡೆದುಕೊಳ್ಳಬಹುದು. ಮತ್ತು  ಆಯಾ ವಿಷಯದಲ್ಲಿರುವ ನಿಮ್ಮ ದುರ್ಬಲತೆಗಳನ್ನು (Weak Points) ಕಂಡುಹಿಡಿದು, ಅವುಗಳ ಮೇಲೆ ಹೆಚ್ಚಿನ ಒತ್ತು ನೀಡಲು ಸಹಾಯಕವಾಗಿದೆ.

8. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆ. (Eat Healthy and Nutritious food)

            ನಾವು ಸೇವಿಸುವ ಆಹಾರ ಆರೋಗ್ಯಕರ ಮತ್ತು ಪೌಷ್ಟಿಕವಾಗಿದ್ದರೆ, ಇದರಿಂದ ನಮ್ಮ ದೈಹಿಕ ಆರೋಗ್ಯವು ಸುಸ್ಥಿರವಾಗುತ್ತದೆ. ಅದಲ್ಲದೆ ನಾವು ಸೇವಿಸುವ ಆಹಾರ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಪೌಷ್ಟಿಕ ಆಹಾರದಿಂದ ದೇಹ ಮತ್ತು ಮೆದಳನ್ನು ಸದೃಡವಾಗಿರುತ್ತದೆ. ಸದೃಡ ಮೆದಳು ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಅತ್ಯವಶ್ಯಕವಾಗಿರುತ್ತದೆ. 

9. ಸರಿಯಾದ ನಿದ್ರೆ ಅತ್ಯಗತ್ಯ (Proper Sleep)

            ಪರೀಕ್ಷಾ ಸಮಯದಲ್ಲಿ ದೇಹವು ಉತ್ಸಾಹದಿಂದ ಇರಬೇಕಾಗುತ್ತದೆ. ಹೆಚ್ಚಿನ ಸಮಯ ನಿರಂತರವಾಗಿ ಓದುವುದರಿಂದ ದೈಹಿಕ ಮತ್ತ ಮಾನಸಿಕವಾಗಿ ಆಯಾಸವಾಗುತ್ತದೆ. ಆದ್ದರಿಂದ ದೇಹಕ್ಕೆ 6-7 ಗಂಟೆಯವರೆಗೆ ನಿದ್ರೆಯ ಅವಶ್ಯಕವಿರುತ್ತದೆ.  ಸರಿಯಾದ ಪ್ರಮಾಣದ ನಿದ್ರೆಯಿಂದ ನಿರ್ಣಾಯಕ ಘಟ್ಟದಲ್ಲಿ ದೇಹ ಮತ್ತು ಮೆದಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. 

10. ತಡರಾತ್ರಿಯ ಅಧ್ಯಯನವನ್ನು ನಿಲ್ಲಿಸಿ. (Stop Late Night Studies)

            ಪರೀಕ್ಷೆಯ ಸಮಯದಲ್ಲಿ ತಡ ರಾತ್ರಿಯವರೆಗೆ  ಓದುವುದನ್ನು ನಿಲ್ಲಿಸಬೇಕು. ಇದರಿಂದ ನಿಮ್ಮ ಮೆದಳು ಮತ್ತು ದೇಹದ ಕಾರ್ಯದ ಮೇಲೆ ಪರಿಣಾಮ ಬೀಳುತ್ತದೆ. ತಡ ರಾತ್ರಿ ಅಧ್ಯಯನ ನಿಮ್ಮ ನಿರ್ಣಾಯಕ ಸಾಮರ್ಥ್ಯ ಮತ್ತು ನಿದ್ರಾ ಅವಧಿ ಎರಡನ್ನು ಕಡಿಮೆ ಮಾಡುತ್ತದೆ. ಹಗಲಿನ ಸಮಯದಲ್ಲೂ ಕೂಡಾ ಆಯಾಸವೆನಿಸುತ್ತದೆ. ಆದ್ದರಿಂದ ಬೇಗನೆ ಮಲಗಿ , ಬೇಗನೆ ಎದ್ದು ಬೆಳಗಿನ ಸಮಯದಲ್ಲಿ ಅಧ್ಯಯನ ಮಾಡುವುದು ಉತ್ತಮ. 

11. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಿರುವುದು (Ensure to be physically and mentally fit)

                ಆರೋಗ್ಯಕರ ಆಹಾರ , ಸರಿಯಾದ ನಿದ್ರೆ , ಸಂಗೀತದ ಆಲಿಕೆ , ಬೆಳಗಿನ ನಡಿಗೆ , ಬೆಳಗಿನ ವ್ಯಾಯಾಮ , ಧನಾತ್ಮಕ ಪರಿಸರ , ಧ್ಯಾನ ಇವೆಲ್ಲವೂಗಳಿಂದ ಒತ್ತಡ ಕಡಿಮೆಯಾಗುತ್ತದೆ. ಇವುಗಳಿಂದಲೆ ಪರೀಕ್ಷಾ ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಿರಬಹುದು.

12. ಗುಂಪು ಅಧ್ಯಯನ(Group Study)

            ಹೆಚ್ಚಿನ ಫಲಿತಾಂಶವನ್ನು ಪಡೆಯಲು ಗುಂಪು ಅಧ್ಯಯನ ಒಂದು ಉತ್ತಮ ಆಯ್ಕೆಯಾಗಿದೆ.
ಇದರಿಂದ ನಿಮ್ಮಲ್ಲಿರುವ ಸಂಶಯಗಳು , ತಿಳಿಯದ ಅಂಶಗಳನ್ನು ಬಗೆಹರಿಸಕೊಳ್ಳಬಹುದು. ವಿಷಯಗಳನ್ನು ಶಿಕ್ಷಕರಿಗಿಂತ ಸ್ನೇಹಿತರೊಂದಿಗೆ ಚರ್ಚಿಸಲು ಸುಲಭವಾಗುತ್ತದೆ. ಸ್ನೇಹಿತರು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಬಹುದು ಮತ್ತು ಅಧ್ಯಯನ ವಿಚಾರಗಳೊಂದಿಗೆ ನಿಮಗೆ ಮಾರ್ಗದರ್ಶನ ನೀಡಬಹುದು. ಪ್ರತಿ ವಿಷಯದಲ್ಲಿ ಬರುವ ಸಮಸ್ಯೆಗಳನ್ನು ನೀವು ಸ್ನೇಹಿತರೊಂದಿಗೆ ಚರ್ಚಿಸಬಹುದು, ಅದೇ ರೀತಿ ತಮ್ಮಲ್ಲಿರುವ ನೋಟ್ಸಗಳಿಂದ ಅವರು ನಿಮಗೆ ಸಹಾಯ ಮಾಡಬಲ್ಲರು.

13. ಪರೀಕ್ಷೆಗೆ ಒಂದು ರಾತ್ರಿ ಮೊದಲು ಓದುವುದನ್ನು ನಿಲ್ಲಿಸಿ. (Stop studying one night before exam)

            ಯಾವುದೇ ವಿದ್ಯಾರ್ಥಿಗೆ ಪರೀಕ್ಷೆಯ ಕೆಲವು ಗಂಟೆಯ ಮೊದಲು ಬಹಳ ನಿರ್ಣಾಯಕ ಸಮಯವಾಗಿರುತ್ತದೆ. ಆ ಸಮಯದಲ್ಲಿ ಸಾಧ್ಯವಾದಷ್ಟು ಓದಬಾರದು. ಆ ಕೆಲವು ಗಂಟೆಗಳ ಕಾಲ ನಿಮ್ಮ ಪುಸ್ತಕಗಳು  , ನೋಟ್ಸಗಳಿಂದ ದೂರವಿರಬೇಕು ಮತ್ತು ಮೆದುಳಿಗೆ ವಿಶ್ರಾಂತಿ ನೀಡಬೇಕು ,ಶಾಂತವಾಗಿರಬೇಕು. ಸರಿಯಾದ ಪ್ರಮಾಣದಲ್ಲಿ ನಿದ್ರಿಸಬೇಕು. ಇದರಿಂದ ಅತೀ ಪರಿಣಾಮಕಾರಿಯಾಗಿ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ.

No comments: